ಹುಮನಾಬಾದ : ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಶಿವಾಜಿ ಮಹಾರಾಜರು ನೀಡಿದ ಕೊಡುಗೆ ಅನನ್ಯ. ಹೀಗಾಗಿ ಎಲ್ಲರೂ ಅವರ ಸಂದೇಶಗಳನ್ನು ಪಾಲಿಸುವ ಮೂಲಕ ನಮ್ಮ ಭವ್ಯ ಪರಂಪರೆಯನ್ನು ಉಳಿಸಿ, ಬೆಳಸಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಬೀದರ ರಸ್ತೆಯಲ್ಲಿನ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜದ ವತಿಯಿಂದ ಏರ್ಪಡಿಸಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಹಾಗೂ ತೊಟ್ಟಿಲು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಶಿವಾಜಿ ಮಹಾರಾಜರ ಇತಿಹಾಸ ಅರೆತುಕೊಳ್ಳಬೇಕು. ಇಂದಿನ ಮಕ್ಕಳಿಗೂ ಮಹಾ ಪುರುಷರ ಆದರ್ಶಗಳ ಕುರಿತು ತಿಳಿಸುವ ಮಹತ್ವದ ಕಾರ್ಯ ನಡೆಯಬೇಕು ಎಂದರು.
ಜಯಂತಿ ನಿಮಿತ್ಯ ಗುರುವಾರ ಬೆಳಗ್ಗೆಯಿಂದಲೇ ಶಿವಾಜಿ ವೃತ್ತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ನೆರೆದ ನೂರಾರು ಮಹಿಳೆಯಿಂದ ಶಿವಾಜಿ ಮಹಾರಾಜರ ತೊಟ್ಟಿಲು ಕಾರ್ಯಕ್ರಮ ವೈಭವದಿಂದ ಜರುಗಿದವು. ನಗರದ ನಾನಾ ಶಾಲೆಯ ವಿಧ್ಯರ್ಥಿಗಳಿ ನೃತ್ಯ ಹಾಗೂ ವೇಷಭೂಷಣ ತೊಟ್ಟ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರರ ಕಣ್ಮನ ಸೆಳೆದವು.

