ಆರೋಗ್ಯ ಮೇಲೆ ಪರಿಣಾಮ ಬೀರುತಿರುವ ಕಾರ್ಖಾನೆಗಳ ಮೇಲೆ ಮೂಲ್ಲಾಜಿ ಇಲ್ಲದೇ ಕಠಿಣ ಕ್ರಮ

Lead AnalystSite Administrator
Release DateFebruary 20, 2026
Intel Density5 min read
Signal Output:
ಆರೋಗ್ಯ ಮೇಲೆ ಪರಿಣಾಮ ಬೀರುತಿರುವ ಕಾರ್ಖಾನೆಗಳ ಮೇಲೆ ಮೂಲ್ಲಾಜಿ ಇಲ್ಲದೇ ಕಠಿಣ ಕ್ರಮ

ಹುಮನಾಬಾದ : ಪರಿಸರ ಮಾಲಿನ್ಯ ಷರತ್ತುಗಳನ್ನು ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ರಾಜ್ಯದಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಟೈರ್ ಪೈರೋಲಿಸಿಸ್ ಘಟಕಗಳಿಗೆ ಪ್ರತ್ರೇಕಗಳಿಗೆ ಪ್ರತ್ಯೇಕ ನೀತಿ ನಿಯಮಗಳು ಜಾರಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ ನರೇಂದ್ರ ಸ್ವಾಮಿ ತಿಳಿಸಿದರು. 

ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ತಂಡದೊಂದಿಗೆ ಕಾರ್ಖಾನೆಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಟೈರ್ ಪೈರೋಲಿಸಿಸ್ ಘಟಕಗಳು ನಿಯಮ ಪಾಲಿಸದಿದ್ದರೆ ಸಾರ್ವಜನಿಕರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾರಣ ಸಾರ್ವಜನಿಕರ ಹಿತ ದೃಷ್ಟಿಯಿಂದ ಟೈರ್ ಪೈರೋಲಿಸಿಸ್ ಘಟಕಗಳಿಗೆ ಬಿಗುವಿನ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

 ಫಾರ್ಮಾ ಕಾರ್ಖಾನೆಗಳು ಸಹಿತ ಕೇಲ ಲೊಪ ದೋಷ ಕಂಡುಬಂದಿದೆ ಅದನ್ನು ಸರಿಪಡಿಸದೇ ಇದ್ದಲ್ಲಿ ಅಂತಹ ಕಾರ್ಖಾನೆಗಳ ಮೇಲು ಕ್ರಮ ವಹಿಸುವದರಲ್ಲಿ ಸಂದೇಹ ವಿಲ್ಲ.  ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ರಾಸಾಯನಿಕ ತ್ಯಾಜ್ಯದ  ಅಗ್ನಿ ಅವಘಡ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು,  ಎಲ್ಲವು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಗಮನಿಸಬೇಕು ಎನ್ನುವುದು ತಪ್ಪು. ರಾಜ್ಯದಲ್ಲೆ 250 ಜನ ಸಿಬ್ಬಂದಿಗಳು ಇದ್ದಾರೆ. ಕಚೇರಿ, ಸಭೆ ಹಾಗೂ ಕಾರ್ಖಾನೆಗಳ ಭೇಟಿ ಸೇರಿದಂತೆ ಎಲ್ಲವು ಗಮನಿಸಲು ಆಗುವದಿಲ್ಲ. ಸುಧಾರಣೆ ಮಾಡಲು ಸಮಯ ಬೇಕು.  ಜಿಲ್ಲಾಢಳಿತ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ತಿಳಿಸಲಾಗುವುದು. ಇಂತಹ ಘಟನೆಗಳು ತಡೆಗಟ್ಟುವ ಜವಾಬ್ದಾರಿಯು ಅವರ ಮೇಲೆ ಇದೆ. ಕೈಗಾರಿಕಾ ಪ್ರದೇಶದಿಂದ ಪರಿಸರ ಮೇಲೆ ಹಾಗೂ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಟ ಪರಿಣಾಮಗಳ ಕುರಿತು ದೂರು ನೀಡಿದಲ್ಲಿ ನಾನ್ನು ಖುದ್ದಾಗಿ ಭೇಟಿ ನೀಡಿ ಪರಿಶಿಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೆನೆ ಎಂದರು.

ಮುಖ್ಯ ಪರಿಸರ ಅಧಿಕಾರಿ ವಿಜಯಕುಮಾರ ಕಟಕಭಾವಿ, ಗೋಕುಲ ಐ.ಎಫ್.ಎಸ್, ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮೃತ್ಯುಂಜಯ, ಸಂತೋಷ ನಾಟಿಕರ್ ಸೇರಿದಂತೆ ಅನೇಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಇದ್ದರು.