ಕಸ್ಟಡಿ ದೌರ್ಜನ್ಯ ನಡೆದರೆ ತಕ್ಷಣವೇ ಎಫ್‌ಐಆರ್ | ಡಿಜಿಪಿ ಡಾ. ಸಲೀಂ ಆದೇಶ

Lead AnalystSite Administrator
Release DateMay 19, 2026
Intel Density5 min read
Signal Output:
ಕಸ್ಟಡಿ ದೌರ್ಜನ್ಯ ನಡೆದರೆ ತಕ್ಷಣವೇ ಎಫ್‌ಐಆರ್ |  ಡಿಜಿಪಿ ಡಾ. ಸಲೀಂ ಆದೇಶ

ಬೆಂಗಳೂರು: ಕಸ್ಟೋಡಿಯಲ್ ಡೆತ್ ಅಥವಾ ಲಾಕಪ್ ಡೆತ್ ಬಗ್ಗೆ ಪೊಲೀಸರ ಕರ್ತವ್ಯಲೋಪದ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ನಿರ್ದೇಶಕ ಡಾ ಎಂ.ಎ.ಸಲೀಂ ಮಹಾ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (ಬಿಎನ್‌ಎಸ್ಎಸ್) ಅಡಿಯಲ್ಲಿ ಕೆಲವೊಂದು ನಿಯಮ ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಪೊಲೀಸರಿಗೆ ಸೂಚಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿರುವಾಗ ದೌರ್ಜನ್ಯ ನಡೆದ ಕೂಡಲೇ ಸ್ಥಳೀಯ ಠಾಣಾಧಿಕಾರಿ ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು. ನಂತರ ಹಿರಿಯ ಅಧಿಕಾರಿಗಳಿಗೆ ತಕ್ಷಣ ವರದಿ ಸಲ್ಲಿಸಬೇಕು. ದೌರ್ಜನ್ಯ, ಕಸ್ಟೋಡಿಯಲ್ ಪ್ರಕರಣಗಳು ನಡೆದರೆ ತಕ್ಷಣವೇ ಠಾಣೆಯ ಸಿಸಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಬೇಕು.

ಒಂದು ವೇಳೆ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟರೆ, ಕೂಡಲೇ ಸಂಬಂಧಪಟ್ಟ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಅಧಿಕೃತ ಮಾಹಿತಿ ನೀಡಿ, ಇನ್‌ಕ್ವೆಸ್ಟ್ ಹಾಗೂ ನ್ಯಾಯಾಂಗ ಕೋರಬೇಕು. ತನಿಖೆಗೆ ಸಂತ್ರಸ್ತರ ಹೇಳಿಕೆಗಳು ಮತ್ತು ಶವಪರೀಕ್ಷೆಯ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಆಡಿಯೋ ಮತ್ತು ವಿಡಿಯೋ . ರೆಕಾರ್ಡ್ ಪ್ರಕ್ರಿಯೆಯೊಂದಿಗೆ ಮಾಡಬೇಕು. ಆ ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಯಾದರೆ, ತನಿಖಾಧಿಕಾರಿಗಳು ಹಳೆಯ ಡೈರಿಗಳನ್ನು ಪರಿಶೀಲಿಸುವುದು ಮಾತ್ರವಲ್ಲದೆ, ಖುದ್ದಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಪ್ರಕ್ರಿಯೆ ಸರಿಯಾಗಿದೆಯೇ ಮರುಪರಿಶೀಲಿಸಬೇಕು. ಎಂದು

ಆರೋಪಿತ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವ ಮೊದಲು ಸೂಕ್ತ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಅನುಮತಿ ಪಡೆಯಬೇಕು. ಹಿಂಸಾಚಾರ ಹಾಗೂ ಕಸ್ಟೋಡಿಯಲ್ ಡೆತ್ ಪ್ರಕರಣಗಳ ತನಿಖೆ ವೇಳೆ ಸ್ಥಳೀಯ ಪೊಲೀಸರು ಯಾವುದೇ ಪ್ರಭಾವ ಬೀರದಂತೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸದಂತೆ ತಡೆಯಲುಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು.

ತನಿಖಾ ಅವಧಿಯಲ್ಲಿ ಯಾವುದೇ ನಿಯಮ ನೇರ ಹಂತದಲ್ಲಿಯೂ ಉಲ್ಲಂಘನೆಯಾದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಪೊಲೀಸ್ ಕನ್ನಡಿಯಲ್ಲಿ ಆರೋಪಿಗಳ ಮೇಲೆ ದೌರ್ಜನ್ಯ ಮತ್ತು ಕಸ್ಟೋಡಿಯಲ್ ಡೆತ್ ಪ್ರಕರಣಗಳಲ್ಲಿ ಸ್ಥಳೀಯ ತನಿಖಾ ಅಧಿಕಾರಿಗಳು ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಎಫ್‌ಐಆರ್ ದಾಖಲು, ಸ್ಥಳ ಮಹಜರು ಸೇರಿ ಪ್ರಮುಖ ಸಾಕ್ಷಾಧಾರಗಳ ಕಲೆ ಹಾಕುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಈ ಮಾರ್ಗಸೂಚಿ ಹೊರಡಿಸಲಾಗಿದೆ.