ಹುಮನಾಬಾದ: ಕರ್ತವ್ಯಲೋಪ ಎಸಿಗಿದ ಆರೋಪದಡಿ ಮನ್ನಾಎಖೇಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರನ್ನು ಸೇರಿ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಬಿಡುಗಡೆಗೊಳ್ಳಿಸುವಂತೆ ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ, ಕಲ್ಯಾಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಡಾ. ಜೈರಾಜ್ ಫಿಜಿಶಿಯನ್, ರೈಚಲ್ ರಾಣಿ ಶುಶೂಷಾಧಿಕಾರಿ (ಎನ್.ಹೆಚ್.ಎಂ) ಹಾಗೂ ಶರಣಬಸವ ಸಿಂಗ್ರಿ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ (ಎನ್.ಹೆಚ್.ಎಂ) ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಘಟನೆಯ ವಿವರ; ಮನ್ನಾಎಖೇಳ್ಳಿ ನಿವಾಸಿ ಮಹಮ್ಮದ್ ರಿಯಾಜ್ ದೂರು ಸಲ್ಲಿಸಿದರು. ತಾಳಮಡಗಿ ಗ್ರಾಮದ ರುಬಿನಾ ಆಯಾಜ್ ಇವರು ಹೆರಿಗೆಗಾಗಿ 9-6-26 ರಂದು ಸಮುದಾಯ ಆರೋಗ್ಯ ಕೇಂದ್ರ ಮನ್ನಾಎಖೇಳ್ಳಿಗೆ ಸಂಜೆ 5:00 ಬಂದಾಗ ಕರ್ತವ್ಯದ ಮೇಲಿದ್ದ ವೈದ್ಯಾಧಿಕಾರಿಗಳಾದ ಡಾ. ಜ್ಯರಾಜ, ಎಸ್.ಬಿ.ಸಿಂಗ್ರಿ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ (ರಕ್ತ ನಿಧಿ ಕೇಂದ್ರ),ರೈಚಲ್ ರಾಣಿ ಎನ್‌ಹೆಚ್‌ಎಂ ಶುಶೂಷಾಧಿಕಾರಿ, ಸುರೇಖಾ ಶುಶೂಷಾಧಿಕಾರಿ, ಶಂಶಾದ ಬೇಗಂ ಗ್ರೂಪ್ ಡಿ ನೌಕರರು ಕರ್ತವ್ಯದ ಮೇಲಿದ್ದು, ಸಂಜೆ 7:30 ಕ್ಕೆ ಹೆರಿಗೆ ಆಗಿದೆ. ಹೆರಿಗೆಯ ನಂತರ ತಾಯಿಗೆ ತೀವ್ರತರವಾದ ರಕ್ತಸ್ರಾವ ಆಗಿದ್ದು ಆಸ್ಪತ್ರೆಯವರು ಬ್ರಿಮ್ಸ್ ಆಸ್ಪತ್ರೆ ಬೀದರಗೆ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯೂಲೆನ್ಸ್ ಮುಖಾಂತರ ರವಾನಿಸಿರುತ್ತಾರೆ. ಅಂಬುಲೆನ್ಸ್ ಬಂದ ತಕ್ಷಣ ಅಂಬ್ಯೂಲೆನಲ್ಲಿ ಕಳಹಿಸುವ ಮುಂಚೆ ಬಾಣಂತಿಯ ಪೋಷಕರಿಂದ ರೂ.4000 ಗಳನ್ನು ಶುಶೂಷಕರು ಮತ್ತು ಗ್ರೂಪ್ ಡಿ ನೌಕರರು ಹಣ ಪಡೆದುಕೊಂಡಿರುತ್ತಾರೆ ಎಂದು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಎದುರಿನಲ್ಲಿಯೇ ದೂರುದಾರ ಹೇಳಿಕೆ ನೀಡಿದ್ದು, ಅದಲ್ಲದೇ ಆಸ್ಪತ್ರೆಯ ಕರ್ತವ್ಯದ ಮೇಲಿದ್ದ ಶುಶೂಷಾಧಿಕಾರಿ ಹಾಗೂ ಗ್ರೂಪ್ ಡಿ ಸಿಬ್ಬಂದಿಯವರ ನಿರ್ಲಕ್ಷತನ ದಿಂದಲೇ ಹರಿಗಾಗಿ ಬಂದಿರುವ ರುಬೀನಾ ಇವರು ಮರಣ ಹೊಂದಿರುತ್ತಾರೆಂದು ದೂರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆ/ ತನಿಖೆ ನಡೆಸಿ ಮೇಲ್ನೋಟಕ್ಕೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷತನ ಕಂಡು ಬಂದ ಹಿನ್ನೆಲೆಯಲ್ಲಿ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ವಿವರಿಸಲಾಗಿದೆ.
