ಬಸವಕಲ್ಯಾಣ: ತಾಲೂಕಿನ ತಡೋಳ ರಾಜೇಶ್ವರ ಶಿವಾಚಾರ್ಯರು ಬೀದರ ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ವಿವಿಧ ಪ್ರಮುಖರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ದಾರಿ ತಪ್ಪುತ್ತಿರುವ ಸಮಾಜವನ್ನು ಸುಧಾರಿಸುವ ಕಡೆಗೆ ಗಮನ ಹರಿಸಬೇಕಾಗಿದೆ. ಸಮಾಜದಲ್ಲಿನ ಎಲ್ಲರೂ ಒಂದಾಗಿ ಸ್ವಸ್ಥ ಹಾಗೂ ಸುಂದರ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕುವ ಕೆಲಸ ಮಾಡೋಣ ಎಂದು ಸಂದೇಶ ಸಾರಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಸವರಾಜ ಆರ್ಯ, ಬ್ರಾಹ್ಮಣಸಮಾಜ ಜಿಲ್ಲಾಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಉದ್ಯಮಿ ರಾಜು ಸಲಗಾರ, ಪತ್ರಕರ್ತ ದುರ್ಯೋಧನ ಹೂಗಾರ ಇದ್ದರು.
